ಕೃಷ್ಣ ಸೂಕ್ತಿ

ಉಡುಪಿಯಿಂದ ಪ್ರಕಟವಾಗುತ್ತಿದ್ದ ಕನ್ನಡದ ಒಂದು ಮಾಸಪತ್ರಿಕೆ. 1905ರಲ್ಲಿ ಕೆರೋಡಿ ಸುಬ್ಬರಾಯರಿಂದ ಸ್ಥಾಪಿತವಾಯಿತು. ಅವರ ಅನಂತರ ಕಡೆಕಾರು ರಾಜಗೋಪಾಲಕೃಷ್ಣರಾಯರು ಸಂಪಾದಕರಾಗಿ ಪತ್ರಿಕೆಯನ್ನು ಅನೇಕ ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿಕೊಂಡು ಬಂದರು. ಸಣ್ಣ ಕತೆಗಳು, ವಿಚಾರಪೂರಿತ ಲೇಖನಗಳು ಮತ್ತು ಪ್ರಬಂಧಗಳು ಇದರಲ್ಲಿ ಪ್ರಕಟವಾಗುತ್ತಿದ್ದವು. ಜನಪ್ರಿಯ ಕನ್ನಡ ಮಾಸಪತ್ರಿಕೆಯಾಗಿ ಇದು ಹಲವು ವರ್ಷಗಳ ಕಾಲ ನಡೆಯಿತು. 
														(ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ